ಚೀನಾದಲ್ಲಿ ಈಗ ಮತ್ತೊಂದು ರೀತಿಯ ಕಾಯಿಲೆ ಹರಡಿದೆ. ಅಲ್ಲಿನ ಮಕ್ಕಳಲ್ಲಿ ಉಸಿರಾಟ ಸಂಬಂಧಿ ತೊಂದರೆಗಳು ಹಚ್ಚುತ್ತಿವೆ. ಸಾವಿರಾರು ಮಕ್ಕಳು ಆಸ್ಪತ್ರೆಗೆ ದಾಖಲಾಗಿವೆ. ಚೀನಾದ ಆರೋಗ್ಯ ಸಮಸ್ಯೆಗಳು ತಮ್ಮ ದೇಶಕ್ಕೂ ಕಾಲಿಡದಂತೆ ಎಲ್ಲ ರಾಷ್ಟ್ರ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಭಾರತವು ಸಹ ಕೋವಿಡ್ ಸಮಯದಲ್ಲಿ ಜಾರಿಗೊಳಿಸಿದಂತೆ, ಈಗ ಮತ್ತೆ ಮಾರ್ಗಸೂಚಿಗಳನ್ನ ಕಟ್ಟುನಿಟ್ಟಾಗಿ ಅನುಷ್ಠಾನ ಮಾಡಲು ಸಜ್ಜಾಗಿದೆ. ಮೊದಲ ಹೆಜ್ಜೆ ಎಂಬಂತೆ ರಾಷ್ಟ್ರಗಳ ಕೆಲವು ರಾಜ್ಯಗಳಿಗೆ ಕೆಲವು ಸೂಚನೆಗಳನ್ನು ನೀಡಿದೆ. ಕರ್ನಾಟಕದ ಆರೋಗ್ಯ ಇಲಾಖೆ ಅಧಿಕಾರಿಗಳು ಕೂಡ ಸಂಭಾವ್ಯ ಸಮಸ್ಯೆಗೆ ಸಾಕಷ್ಟು ಮೊದಲೇ ತಯಾರಿಗೆ ಮುಂದಾಗಿದ್ದಾರೆ. ಆರೋಗ್ಯ ಸಿಬ್ಬಂದಿಗೆ ಮಾಸ್ಕ್ ಕಡ್ಡಾಯ ಶೀತ, ಜ್ವರ ಉಸಿರಾಟದ ತೊಂದರೆ ಇರುವ ನೋಂದಣಿ ಮಾಡಿಕೊಳ್ಳಲು ಸೂಚಿಸಲಾಗಿದೆ.
ಏನಿದು ಸೋಂಕು ?
ಮೈಕೋ ಪ್ಲಾಸ್ಮಾ ನ್ಯುಮೋನಿಯಾ ಮತ್ತು ರೆಸ್ಪಿರೇಟರಿ ಸೆನ್ಸಿಟಿಎಲ್ ಹೆಸರಿನ ವೈರಸ್, ಈ ಉಸಿರಾಟದ ಕಾಯಿಲೆ ಹೆಚ್ಚಳಕ್ಕೆ ಕಾರಣ. ಮೈಕೋ ಪ್ಲಾಸ್ಮಾ ನ್ಯುಮೋನಿಯಾ ಸಾಮಾನ್ಯ ಸೋಂಕು, ಚಿಕ್ಕ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಯುವಕರಲ್ಲಿ ಸೌಮ್ಯವಾದ ಅನಾರೋಗ್ಯ ಉಂಟುಮಾಡುತ್ತದೆ. ಆದರೆ ಇದು ಶ್ವಾಸಕೋಶಕ್ಕೆ ಸೋಂಕನ್ನು ಉಂಟು ಮಾಡಬಹುದು ಮಕ್ಕಳ ಪ್ರಾಣಕ್ಕೂ ಸಂಚಕಾರ ತರಬಲ್ಲದು.
ಮೈಕೋ ಪ್ಲಾಸ್ಮಾ ಸೋಂಕು ಹೀಗೆ ಹರಡುತ್ತದೆ ?
ಸೋಂಕಿತರು ಕೆಮ್ಮುವಾಗ ಮತ್ತು ಸೀನುವಾಗ ಬಿಡುಗಡೆಯಾಗುವ ಹನಿಗಳ ಸಂಪರ್ಕದ ಮೂಲಕ ಮೈಕ್ರೋ ಪ್ಲಾಸ್ಮ ಹರಡುತ್ತದೆ. ಇದು ಹರಡಲು ಸೋಂಕಿತರ ಜೊತೆ ಸಂಪರ್ಕ ಅಗತ್ಯ. ಸಾರ್ವಜನಿಕ ಸ್ಥಳಗಳಲ್ಲಿ 10 ದಿನಗಳಿಗಿಂತ ಕಡಿಮೆ ಇರುತ್ತದೆ.
ಮೈಕೋ ಪ್ಲಾಸ್ಮಾದ ಲಕ್ಷಣಗಳೇನು ?
ಮೈಕೋ ಪ್ಲಾಸ್ಮಾ ಸೋಂಕಿನ ಸಾಮನ್ಯ ಲಕ್ಷಣಗಳು ಜ್ವರ, ಕೆಮ್ಮು, ನೋಯುತ್ತಿರುವ ಗಂಟಲು, ತಲೆ ನೋವು ಮತ್ತು ಆಯಾಸ. ಇದರ ಹೊರತಾಗಿ ನ್ಯುಮೋನಿಯಾ ಸಹ ಸಂಭವಿಸಬಹುದು. ಗಂಭೀರ ಪ್ರಕರಣಗಳಲ್ಲಿ ಆಸ್ಪತ್ರೆಗೆ ದಾಖಲಾಗುವುದು ಅನಿವಾರ್ಯ. ಈ ಸೋಂಕು ಕಿವಿ ಸಮಸ್ಯೆಗಳನ್ನು ಉಂಟು ಮಾಡಬಹುದು. ರೋಗ ಲಕ್ಷಣಗಳು ಕೆಲವು ದಿನಗಳಿಂದ ಒಂದು ತಿಂಗಳವರೆಗೆ ಇರುತ್ತದೆ. ಸಾಮಾನ್ಯವಾಗಿ ಸೋಂಕಿಗೆ ಒಳಗಾದ ಎರಡು ಮೂರು ವಾರಗಳ ನಂತರ ಪ್ರಾರಂಭವಾಗುತ್ತದೆ.
ಮುನ್ನೆಚ್ಚರಿಕೆ ಕ್ರಮಗಳು
1. ಇತರ ಸೋಂಕಿನಂತೆ ಸುರಕ್ಷತಾ ಕ್ರಮಗಳನ್ನು ಅನುಸರಿಸಿದರೆ ಮೈಕೋ ಪ್ಲಾಸ್ಮಾ ಸೋಂಕು ಹರಡುವುದನ್ನು ತಡೆಯಬಹುದು.
2. ಸುತ್ತಲೂ ಶುದ್ದ ಉತ್ತಮ ವಾತಾವರಣ ಇರುವಂತೆ ನೋಡಿಕೊಳ್ಳಬೇಕು.
3. ಸೋಂಕಿತ ವ್ಯಕ್ತಿಗಳೊಂದಿಗೆ ನಿಕಟ ಸಂಪರ್ಕವನ್ನು ತಪ್ಪಿಸಬೇಕು ಮನೆಯಲ್ಲಿ ಇರುವುದು ಒಳಿತು.
4. ಅನಾರೋಗ್ಯದಿಂದ ಬಳಲುತ್ತಿದ್ದರೆ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಬೇಕು ವೈದ್ಯರ ಸಲಹೆಯನ್ನು ತೆಗೆದುಕೊಳ್ಳಬೇಕು.
5.ನಿಯಮಿತವಾಗಿ ಕೈಗಳನ್ನು ತೊಳೆಯಬೇಕು ಫೇಸ್ ಮಾಸ್ಕ್ ಬಳಸಬೇಕು.
ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆಯ ಮಾರ್ಗದರ್ಶಿ
0 Comments